ಮೀನುಗಾರ ಮಕ್ಕಳಿಗೆ ಶಿಷ್ಯವೇತನ: ಅವಕಾಶವನ್ನ ಕಳೆದುಕೊಳ್ಳಬೇಡಿ‌ ವಿದ್ಯಾರ್ಥಿಗಳೇ

Sanchari.in Team
0

 ಪ್ರಿಯ ಓದುಗರೆ,



    ಕರ್ನಾಟಕದ ಸರಕಾರ 2022-23ನೇ ಸಾಲಿನಿಂದ ಮುಖ್ಯಮಂತ್ರಿ ವಿದ್ಯಾ ನಿಧಿ ಕಾರ್ಯಕ್ರಮದ ಅಡಿಯಲ್ಲಿ ಮೀನುಗಾರರ ಅಥವಾ ಮೀನುಕೃಷಿಕರ ಮಕ್ಕಳಿಗೆ ಶಿಷ್ಯವೇತನವನ್ನು ನೀಡಲು ಅರ್ಜಿಯನ್ನ ಆಹ್ವಾನಿಸಿದೆ. 

    ಮೀನುಗಾರ ಸಮುದಾಯದ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ರಾಜ್ಯ ಸರ್ಕಾರ 2 ಸಾವಿರದಿಂದ 11 ಸಾವಿರದವರೆಗೆ ವಿದ್ಯಾರ್ಥಿ ವೇತನ ನೀಡಲಿದೆ. ರೈತ ವಿದ್ಯಾನಿಧಿ ವಿದ್ಯಾರ್ಥಿವೇತನ ಯೋಜನೆಯು ಕೃಷಿ ಇಲಾಖೆ ಅಡಿಯಲ್ಲಿ ಬರುತ್ತದೆ. ಈ ಸಂಬಂಧಿತ ಕರ್ನಾಟಕ ಸರಕಾರ ನಡವಳಿಯನ್ನ ಹೊರಡಿಸಿದ್ದು ಹಾಗೂ ಪತ್ರಿಕಾ ಪ್ರಕಟಣೆಯನ್ನು ಕೂಡ ಹೊರಡಿಸಿದ್ದು ತಕ್ಷಣ ಮೀನುಗಾರ ಸಮುದಾಯದ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಈ ಕುರಿತು ತಮ್ಮ ಹತ್ತಿರದ ತಾಲೂಕ ಮೀನುಗಾರಿಕಾ ಇಲಾಖೆಯ ಕಚೇರಿಗೆ ಹೋಗಿ ಸಂಪರ್ಕಿಸಿ ಮಾಹಿತಿ ಪಡೆಯಿರಿ. 

    FRUITS IDಯನ್ನ ಮೊದಲು ಪಡೆಯಬೇಕಿದ್ದು ನಂತರ ಸ್ಕಾಲರ್ಷಿಪ್ ಅರ್ಜಿ ಸಲ್ಲಿಸುವುದು ಇರುತ್ತದೆ. ಕಾರಣ ಸದರಿ ಐಡಿಯನ್ನು ಪಡೆಯಲು     

೧. ಪಾಲಕರ ಆಧಾರ್ ಕಾರ್ಡ್ ಪ್ರತಿ 

೨. ಮೀನುಗಾರ ಸಹಕಾರ ಸಂಘದ ಸದಸ್ಯತ್ವದ ಪ್ರಮಾಣ ಪತ್ರ 

೩. ಬ್ಯಾಂಕ್ ಖಾತೆಯ ವಿವರ 

೪. ಮೊಬೈಲ್ ನಂಬರ್ ಹಾಗೂ 

೫. ವಿದ್ಯಾರ್ಥಿಗಳ ಶಾಲಾ ವಿದ್ಯಾಭ್ಯಾಸದ ಐಡಿ ಕಾರ್ಡ್ ಅಥವಾ ಶಾಲಾ ವ್ಯಾಸಂಗ ದೃಢೀಕರಣ ಪತ್ರ 

    ಈ ಮೇಲಿನ ದಾಖಲೆಗಳೊಂದಿಗೆ ತಾಲೂಕ ಮೀನುಗಾರಿಕೆ ಇಲಾಖೆಯನ್ನ ಸಂಪರ್ಕಿಸಲು ತಿಳಿಸಿದ್ದಾರೆ. ಕಾರಣ ತಮ್ಮ ತಾಲೂಕಿನ ಸಹಾಯಕ ನಿರ್ದೇಶಕರು, ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ ಇಲ್ಲಿಗೆ ತಕ್ಷಣವೇ ಭೇಟಿ ನೀಡುವುದು. 

ವಾಟ್ಸಾಪ್‌ ನಂಬರ್

Post a Comment

0Comments

kindly give us feedback

Post a Comment (0)

#buttons=(Accept !) #days=(20)

Our website uses cookies to enhance your experience. Check Now
Accept !