ಪ್ರಬಂಧಗಳು

Sanchari.in Team
0

 5.ಪ್ರಾಚ್ಯ ಸ್ಮಾರಕಗಳ ಸಂರಕ್ಷಣೆ

ಪೀಠಿಕೆ :
ಸ್ಮಾರಕವು ಬಹಿರಂಗವಾಗಿ ವ್ಯಕ್ತಿಯನ್ನು ಪ್ರಶಂಸಿಸಲು ಅಥವಾ ಮುಖ್ಯವಾದ ಘಟನೆಯನ್ನು ನೆನೆಪಿಸಿಕೊಳ್ಳಲು ಅಥವಾ ಒಂದು ಸಾಮಾಜಿಕ ಸಮೂಹದ ಹಿಂದಿನ ಘಟನೆಗಳ ನೆನಪಿನ ಸಂದರದಲ್ಲಿ ಆ ಗುಂಪಿಗೆ ಪ್ರಮುಖವಾಗಿದ್ದ ಘಟನೆಯನ್ನು ಪ್ರಖ್ಯಾತಗೊಳಿಸಲು ಕಟ್ಟುವಂತಹ ಒಂದು ಬಗೆಯ ರಚನಾ ವಿನ್ಯಾಸ, ಇವುಗಳನ್ನು ಪಟ್ಟಣಗಳ, ನಗರಗಳ ಸೊಬಗನ್ನು ಹೆಚ್ಚಿಸಲು ಯೋಜಿತ ರೀತಿಯಲ್ಲಿ ನಿಮ್ಮಿಸಲಾಗಿರುತ್ತದೆ.

ವಿಷಯ ನಿರೂಪಣೆ:

ಪ್ರಭಾವ ಉಂಟುಮಾಡುವುದು ಐತಿಹಾಸಿಕ ಹಾಗೂ ಬೀರುವುದು ಹಾಗೂ ವಿಸ್ಮಯವನ್ನು ಸ್ಮಾರಕಗಳ ಉದ್ದೇಶವಾಗಿದೆ. ಸ್ಮಾರಕಗಳು ರಾಜಕೀಯ ಮಾಹಿತಿಗಳನ್ನು ತಿಳಿಸುವ ಉದ್ದೇಶದಿಂದಲೂ ಸಹ ನಿರಿಸಲ್ಪಡುತ್ತವೆ. ಸ್ಮಾರಕಗಳನ್ನು ಸಾವಿರಾರು ವರಗಳಿಂದ ನಿಮ್ಮಿಸಲಾಗುತ್ತಿದೆ. ಅಲ್ಲದೇ ಇವು ಹೆಚ್ಚಿನ ಇರುವಂತಹವು ಹಾಗೂ ನಾಗರಿಕತೆಯ ಪ್ರಖ್ಯಾತ ಚಿಹ್ನೆಯಾಗಿವೆ. ಪ್ರತಿಮೆಗಳ ರೂಪದಲ್ಲಿ ನಿರಿಸಲಾದ ರಚನೆಗಳು (ಕಟ್ಟಡಗಳು), ಅರಮನೆಗಳು, ಸಾವಿನ ಜ್ಞಾಪಕಾರವಾಗಿ ನಿಮ್ಮಿಸಿದ ಸತ್ತವರ ಸಮಾಧಿಗಳು, ಸ್ತಂಭಾಕಾರದ ಸ್ಮಾರಕಗಳು, ವಾಸ್ತುಶಿಲ್ಪ ವೈಭವದ ದೇವಾಲಯಗಳು, ವಿಜಯ ಮಂಟಪಗಳು, ಯುದ್ಧ ಕಾಲ ಸ್ಮಾರಕಗಳು ಮೊದಲಾದ ಪ್ರಕಾರದ ಸ್ಮಾರಕಗಳನ್ನು ಕಾಣಬಹುದು. ಪ್ರಾಚ್ಯವಸ್ತು ಸ್ಮಾರಕಗಳೊಡನೆ ನಮಗೆ ಭಾವನಾತ್ಮಕವಾದ ಸಂಬಂಧವಿದೆ. ಪ್ರಾಚೀನ ಕಾಲದ ಸ್ಮಾರಕಗಳು, ದೇವಾಲಯಗಳು, ಶಿಲಾಶಾಸನಗಳು, ವಾಸ್ತುಶಿಲ್ಪಕಲೆ, ಚಿತ್ರಕಲೆಗಳು ನಮ್ಮ ಭವ್ಯ ಪರಂಪರೆಯ ಕಥೆಯನ್ನು ಹಳುತ್ತವೆ. ನಮ್ಮ ಸಂಸ್ಕೃತಿ ಮತ್ತು ಪರಂಪರೆಯು ಬೆಳೆದು ಬಂದ ರೀತಿಯ ಬಗ್ಗೆ ಬೆಳಕನ್ನು ಚೆಲ್ಲುತ್ತವೆ. ಇದು ನಮ್ಮೆಲ್ಲರ ಆಸ್ತಿಯಾಗಿದೆ. ಐತಿಹಾಸಿಕ ಸ್ಮಾರಕಗಳನ್ನು ವಿರೂಪಗೊಳಿಸದಂತೆ ಹಾಗೂ ನೈಸರಿಕ ಪರಂಪರೆಯ ತಾಣಗಳು ಅತಿಕ್ರಮಣವಾಗದಂತೆ ತಡೆಯುವ ಮಹತ್ತರವಾದ ಜವಾಬ್ದಾರಿಯು ನಮ್ಮ ಮೇಲಿದೆ. ಉಪಸಂಹಾರ :

ಇವುಗಳ ಮಹತ್ವವನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡಲು ಅವುಗಳ ಸಂರಕ್ಷಣೆಯನ್ನು ಮಾಡಬೇಕು. ಪ್ರಾಚೀನ ಸ್ಮಾರಕಗಳು ನಾಡಿನ ಸಾಂಸ್ಕೃತಿಕ ಸಂಪತ್ತು. ನಮ್ಮ ಭವ್ಯ ಪರಂಪರೆಯ ಪ್ರತೀಕ. ಆಧುನೀಕತೆಯ ಭರಾಟೆಯಲ್ಲಿ ಪ್ರಾಚೀನ ಸ್ಮಾರಕಗಳು ನಶಿಸಿಹೋಗುತ್ತಿವೆ. ಗತಕಾಲದ ವೈಭವವನ್ನು ತಿಳಿಸುವ ಐತಿಹಾಸಿಕ ಸ್ಮಾರಕಗಳು, ದೇವಾಲಯಗಳು, ವಾಸ್ತುಶಿಲ್ಪಗಳು, ಚಿತ್ರಕಲೆಗಳು ಸಂರಕ್ಷಣೆ ಇಲ್ಲದೆ ಸೊರಗುತ್ತಿವೆ. ಅವುಗಳ ಸಂರಕ್ಷಣೆ ನಮ್ಮೆಲ್ಲರ ಆದ್ಯಕರವ್ಯ ಎಂಬುದು ನನ್ನ ಅಭಿಪ್ರಾಯವಾಗಿದೆ.

All other Essay Topics Click on the topics

ಪ್ರಬಂಧ ಬರಹಗಳು

'ಪ್ರಬಂಧ' ಎನ್ನುವುದು ಆಂಗ್ಲ ಸಾಹಿತ್ಯದ ಪ್ರಭಾವದಿಂದ ಆಧುನಿಕ ಕನ್ನಡ ಸಾಹಿತ್ಯದಲ್ಲಿ ರೂಪು ಪಡೆದ ಗದ್ಯ ಪ್ರಕಾರ. ಆಂಗ್ಲ ಭಾಷೆಯಲ್ಲಿರುವ "Essay' ಎನ್ನುವುದಕ್ಕೆ ಸಂವಾದಿಯಾಗಿ ಕನ್ನಡದಲ್ಲಿ 'ಪ್ರಬಂಧ' ಅಥವಾ ನಿಬಂಧ ಎಂದು ಕರೆಯಲಾಗುತ್ತದೆ. “ಒಂದು ನಿರ್ಧಿಷ್ಟ ವಿಷಯವನ್ನು ಕುರಿತು ಮಾಹಿತಿ ಸಂಗ್ರಹಿಸಿ, ವಿವರವಾಗಿ, ಅರ್ಥವತ್ತಾಗಿ, ಆಕರ್ಷಕವಾಗಿ ಬರೆದರೆ 'ಪ್ರಬಂಧ' ಎನ್ನಲಾಗುತ್ತದೆ.” 'ಪ್ರಬಂಧ' ಎಂದರೆ 'ಚೆನ್ನಾಗಿ ಕಟ್ಟು' ಎಂದು ಅರ್ಥ. ಪ್ರಬಂಧಗಳಲ್ಲಿ ಅನೇಕ ಬಗೆಗಳಿವೆ. 

ಅವುಗಳನ್ನು ಪ್ರಮುಖವಾಗಿ

1.ವಸ್ತುನಿಷ್ಠ ಪ್ರಬಂಧಗಳು :ಗಡಿಯಾರ, ವಿಮಾನ, ಪೆನ್ನು ಇತ್ಯಾದಿ.

'2.ಈ ಭಾವನಿಷ್ಠ ಪ್ರಬಂಧಗಳು:ಮಳೆ ಬಂದ ಮಾರನೆಯ ದಿನ', 'ಅವನ ಕರವಸ್ತ್ರ, 'ಆ ಪಾರ್ಕಿನಲ್ಲಿ' ಇತ್ಯಾದಿ.

3. ವಿಚಾರಪರ ಪ್ರಬಂಧಗಳು :- 'ಸಾರಿಗೆ ರಾಷ್ಟ್ರೀಕರಣ, 'ವ್ಯವಸಾಯ ಯೋಜನೆಗಳು', 'ಶಿಕ್ಷಣ ಮಾಧ್ಯಮ' ಇತ್ಯಾದಿ..


ಪ್ರಬಂಧವನ್ನು ಬರೆಯುವ ಮೊದಲು ಆಯ್ಕೆಮಾಡಿಕೊಂಡಿರುವ ವಿಷಯಕ್ಕೆ ಸಂಬಂಧಿಸಿದ ಅಂಶಗಳನ್ನು ಉಪಲಬ್ಧ ಮಾಹಿತಿಗಳನ್ನು ಬೇರೆಯವರ ಅಭಿಪ್ರಾಯಗಳನ್ನು ಸಂಗ್ರಹಿಸಿ ಟಿಪ್ಪಣಿ ಮಾಡಿಕೊಳ್ಳಬೇಕು. ವೃತ್ತ ಪತ್ರಿಕೆಗಳು, ನಿಯತಕಾಲಿಕೆಗಳು ಸಂಬಂಧಿಸಿದ ಗ್ರಂಥಗಳು ಇವು ಪ್ರಬಂಧ ಲೇಖನಕ್ಕೆ ಸಹಾಯ ಮಾಡುತ್ತವೆ. ಅಂತರ್ಜಾಲ (Internet)ದಲ್ಲೂ ಸಾಕಷ್ಟು ಮಾಹಿತಿ ಲಭಿಸುತ್ತದೆ. ಯಾವುದೇ ಬಗೆಯ ಪ್ರಬಂಧ ಲೇಖನವಾದರೂ ಅಲ್ಲಿ ಬಳಸಿರುವ ಭಾಷೆ ಸರಳವಾಗಿರಬೇಕು. ಸಂಕ್ಷಿಪ್ತವಾಗಿ ನಿಖರವಾಗಿರಬೇಕು. ವಿಷಯಕ್ಕೆ ಅನುಗುಣವಾಗಿ ಗಂಭೀರವಾದ ಹಾಸ್ಯಪೂರ್ಣವಾದ ಶೈಲಿಯಿರಬೇಕು. ನುಡಿಗಟ್ಟು, ಲೋಕೋಕ್ತಿಗಳು, ವಿಷಯಕ್ಕೆ ಸಂಬಂಧಿಸಿದ ಪ್ರಸಿದ್ಧರ ಹೇಳಿಕೆಗಳನ್ನು ಸಮಂಜಸವಾಗಿ ಬಳಸಿ ಬರೆಯುವುದರಿಂದ ಪ್ರಬಂಧದ ಮೌಲ್ಯ ಹೆಚ್ಚುತ್ತದೆ. ಲೇಖನ ಚಿಹ್ನೆಗಳನ್ನು ಸರಿಯಾದ ರೀತಿಯಲ್ಲಿ ಬಳಸಬೇಕು. ಬರವಣಿಗೆಯಲ್ಲಿ ತಪ್ಪಿಲ್ಲದಂತೆ ಎಚ್ಚರವಹಿಸಬೇಕು.


ಪ್ರಬಂಧ ರಚನೆಯ ಹಂತಗಳು :

1.ಪೀಠಿಕೆ :- ಇದು ಪ್ರಬಂಧದ ವಿಷಯಕ್ಕೆ ಪ್ರವೇಶದ ದ್ವಾರದಂತಿರಬೇಕು. ಇಲ್ಲಿ ವಿಷಯಕ್ಕೆ ಸಂಬಂಧಿಸಿದಂತೆ ವಿಚಾರಗಳನ್ನು ಚಿಕ್ಕದಾಗಿ, ಚೊಕ್ಕವಾಗಿ ಪ್ರಸ್ತಾಪಿಸಬೇಕು.

2.ವಿಷಯ ವಿವರಣೆ :- ಇದು ಪ್ರಬಂಧದ ಬಹುಮುಖ್ಯವಾದ ಭಾಗ, ಇಲ್ಲಿ ವಿಷಯದ ಪೂರ್ಣ ವಿವರವನ್ನು ಅಂಕಿ ಅಂಶ, ಉದಾಹರಣೆಗಳೊಡನೆ ಬೇರೆ ಬೇರೆ ವಾಕ್ಯವೃಂದಗಳಲ್ಲಿ ವಿವರಿಸಬೇಕು. ಆಯಾ ವಾಕ್ಯವೃಂದದಲ್ಲಿರುವ ವಿಷಯಗಳಲ್ಲಿ ಏಕಸೂತ್ರತೆ ಇರುವಂತೆ ಎಚ್ಚರ ವಹಿಸಬೇಕು. ವಿಷಯಗಳ ಕಲಸುಮೇಲೋಗರವಿರಬಾರದು. ಪರಸ್ಪರ ವಿರೋಧಿ ವಿಚಾರಗಳಿಗೆ ಅವಕಾಶವಿರಬಾರದು. ಒಂದು ವಾಕ್ಯವೃಂದದ ವಿಚಾರ ಮತ್ತೊಂದು ವಾಕ್ಯವೃಂದದ ವಿಚಾರಗಳಿಗೆ ಪೂರಕವಾಗಿರಬೇಕು. ಸುಂದರವಾದ ಬರೆವಣಿಗೆ, ಆಕರ್ಷಕ ಶೈಲಿ, ಒಳ್ಳೆಯ ರೀತಿಯ ವಿಷಯ ಪ್ರತಿಪಾದನೆ ಈ ಭಾಗದಲ್ಲಿರಬೇಕು.

3.ಮುಕ್ತಾಯ ಅಥವಾ ಉಪಸಂಹಾರ :- ಪ್ರಬಂಧ ಪೂರ್ಣವಾಗಬೇಕಾದರೆ ಈ ಭಾಗ ಅಗತ್ಯ. ಪ್ರಬಂಧದಲ್ಲಿ ಚರ್ಚಿಸಿರುವ ಪ್ರಮುಖ ಅಂಶಗಳನ್ನು ಇಲ್ಲಿ ಸಾರಾಂಶ ರೂಪದಲ್ಲಿ ನೀಡಬಹುದು. ಇಲ್ಲವೇ ತೀರ್ಮಾನ, ಚಿಂತನೆಗೆ ಪ್ರೇರಣೆ, ಸಮಸ್ಯೆಗಳ ಪರಿಹಾರ ಸೂತ್ರಗಳು ಇತ್ಯಾದಿ ಅಂಶಗಳನ್ನೂ ಸೂಚಿಸಬಹುದು. ಪೀಠಿಕೆಯಂತೆಯೇ ಮುಕ್ತಾಯವೂ ಹಿತಮಿತವಾಗಿ ಆಕರ್ಷಕವಾಗಿರಬೇಕು


Tags

Post a Comment

0Comments

kindly give us feedback

Post a Comment (0)

#buttons=(Accept !) #days=(20)

Our website uses cookies to enhance your experience. Check Now
Accept !