KAS ಮತ್ತು ಗ್ರಾಮ‌ ಆಡಳಿತ ಅಧಿಕಾರಿ (Village Accountant) ಪರೀಕ್ಷೆಗೆ ಕೋಚಿಂಗ್ ಕ್ಲಾಸ್

Sanchari.in Team
0

 ಯಲ್ಲಾಪುರದಲ್ಲಿ ಗ್ರಾಮ‌ ಆಡಳಿತ ಅಧಿಕಾರಿ (Village Accountant) ಮತ್ತು KAS  ಪರೀಕ್ಷೆಗೆ ಕೋಚಿಂಗ್ ಕ್ಲಾಸ್



ಕಂದಾಯ ಇಲಾಖೆಯ ಗ್ರಾಮ‌ ಆಡಳಿತ ಅಧಿಕಾರಿ (VAO) ಹುದ್ದೆಗಳ ನೇಮಕಾತಿ ಪರೀಕ್ಷೆ ಅಧಿಸೂಚನೆ ಹೊರಬಿದ್ದಿದ್ದು, ಪರೀಕ್ಷೆಯ ಸಿದ್ಧತೆ ಪ್ರಾರಂಭವಾಗಿದೆ. 'ಸ್ಟುಡೆಂಟ್ ಜೋನ್' ಕೆರೀಯರ್ ಅಕಾಡೆಮಿ, ಯಲ್ಲಾಪುರ ಇವರ ನೇತೃತ್ವದಲ್ಲಿ ಮಾರ್ಚ್ ತಿಂಗಳ ಮೊದಲ ವಾರದಿಂದ ಪರೀಕ್ಷಾ ತರಬೇತಿ ತರಗತಿಗಳು ಪ್ರಾರಂಭವಾಗಲಿದೆ.

ಈ ತರಬೇತಿಯು KAS, PDO, VA, SDA, FDA, PC‌ ಮುಂತಾದ ಪರೀಕ್ಷೆಗಳಿಗೆ ಕೂಡ ಪೂರಕವಾಗಿದ್ದು, ಸಿಲೇಬಸ್ ಪ್ರಕಾರ ಕಂಪ್ಯೂಟರ್ ಜ್ಞಾನ, ಕನ್ನಡ ಭಾಷೆ, ಇಂಗ್ಲೀಷ ಭಾಷೆ ಇವುಗಳದ್ದೇ ಒಂದು ಪೇಪರ್ ಇರುತ್ತದೆ ಅದಕ್ಕೆಂದೇ ಅನುಭವಿ  ಫ್ಯಾಕಲ್ಟಿಯಿಂದ ಗುಣಮಟ್ಟದ ತರಬೇತಿ ಲಭ್ಯವಿರುತ್ತದೆ, ಉಳಿದಂತೆ ಸಾಮಾನ್ಯ ಜ್ಞಾನದ ಎಲ್ಲಾ ವಿಷಯಗಳು, ಗ್ರಾಮೀಣ ಅಭಿವೃದ್ಧಿ, ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳು, ಪ್ರಚಲಿತ ಘಟನೆಗಳ ತರಗತಿಯೂ ಕೂಡಾ  ನಡೆಯುತ್ತದೆ.ಪ್ರತಿ ವಿಷಯದ ಮೇಲೆ ವರ್ಕಷೀಟ್ ಗಳ ಮುಖಾಂತರ ಕಲಿಕೆಯನ್ನು ದೃಢೀಕರಿಸಿಕೊಳ್ಳಬಹುದಾಗಿದೆ. ಈ ಒಂದು ತರಬೇತಿಯಿಂದ ಬಹು ಪರೀಕ್ಷೆಗಳಿಗೆ ಅನುಕೂಲವಾಗಲಿದೆ. ಕನಿಷ್ಟ ಕಲಿಕಾ ವೆಚ್ಚವನ್ನು ನಿಗದಿಪಡಿಸಲಾಗಿದೆ. ಒಟ್ಟಿನಲ್ಲಿ ವ್ಯವಸ್ಥಿತವಾಗಿ ಉತ್ತಮ ಗುಣಮಟ್ಟದ ತರಬೇತಿ ನಿಮ್ಮ ಹತ್ತಿರದಲ್ಲಿ ದೊರೆಯುತ್ತಿರುತ್ತದೆ.

ಅಕಾಡೆಮಿಯು ಸ್ಮಾರ್ಟ್ ಕ್ಲಾಸ್ ರೂಮ್, 24*7 ಸ್ಟಡಿ ರೂಮ್ ಹೊಂದಿದೆಪ್ರತಿ ರವಿವಾರ ಉಚಿತ ಮಾದರಿ ಪರೀಕ್ಷೆ ಇರುತ್ತಿದ್ದು, ಯಾವುದೇ ಅಭ್ಯರ್ಥಿಗಳು ರಿಜಿಷ್ಟ್ರೇಷನ್ ಮಾಡಿಕೊಂಡು ಭಾಗವಹಿಸಿ ಅದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

ಸೀಮಿತ ವಿದ್ಯಾರ್ಥಿಗಳಿಗೆ ಮಾತ್ರ ತರಗತಿ ಇದ್ದು, ನೋಂದಣಿ ಆರಂಭವಾಗಿದೆ. ಆಸಕ್ತ ಅಭ್ಯರ್ಥಿಗಳು ಅಕಾಡೆಮಿಯ ಕಛೇರಿ ನಂಬರ್ ಗೆ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಅಕಾಡೆಮಿಯವರು ತಿಳಿಸಿರುತ್ತಾರೆ. 

ಫೀಸ್‌ ಕೂಡಾ ತುಂಬಾ ಕಡಿಮೆ ಇದ್ದು ಹೆಣ್ಣುಮಕ್ಕಳಿಗೆ ಹಾಸ್ಟೇಲ್‌ ವ್ಯವಸ್ಥೆ ಇರುತ್ತದೆ. ಒಟ್ಟು ತರಬೇತಿಯ ಮತ್ತು ಉಳಿದುಕೊಳ್ಳುವ ವೆಚ್ಚ ೧೫-೨೦ ಸಾವಿರದೊಳಗೆ ಆಗುತ್ತದೆ ಎಂದು ತಿಳಿದುಬಂದಿದೆ, ಇದೊಂದು ಸುವರ್ಣಾವಕಾಶವಾಗಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಂಸ್ಥೆಯವರು ತಿಳಿಸಿದ್ದಾರೆ.
👉🏿ಸಂಪರ್ಕ ಸಂಖ್ಯೆ : ಸ್ಟುಡೆಂಟ್ ಜೋನ್ ಕೆರೀಯರ್ ಗೈಡೆನ್ಸ್  ಅಕಾಡೆಮಿ. ಡಿ.ಟಿ. ರಸ್ತೆ ಯಲ್ಲಾಪುರ. ಕಛೇರಿ ನಂಬರ್ +91-962-015-9964


Tags

Post a Comment

0Comments

kindly give us feedback

Post a Comment (0)

#buttons=(Accept !) #days=(20)

Our website uses cookies to enhance your experience. Check Now
Accept !